ಇಂದ್ರಾಣಿ ನದಿಯಲ್ಲಿ ನೂರಾರು ಭಕ್ತರಿಂದ ಪವಿತ್ರ ಸ್ನಾನ

ಮಡಿಕೇರಿ:ಕರುನಾಡಿನ ಜೀವನದಿ ಕಾವೇರಿ ತಲಕಾವೇರಿಯಲ್ಲಿ ಉದ್ಭವಿಸಿದ್ದಾಳೆ. ಮಡಿಕೇರಿಯಲ್ಲಿ ಕಾವೇರಿ ಉದ್ಭವ ಆಗುತ್ತಿದ್ದಂತೆ ಉಡುಪಿಯ ಇಂದ್ರಾಣಿ ನದಿಯಲ್ಲಿ ನೂರಾರು ಭಕ್ತರು ಪವಿತ್ರ ಸ್ನಾನ ಮಾಡಿದ್ದಾರೆ. ತಲಕಾವೇರಿ ಇಂದ್ರಾಣಿ ಯಲ್ಲೂ ಉದ್ಭವಿಸುತ್ತಲೇ ಎಂಬ ನಂಬಿಕೆ ಭಕ್ತರಲ್ಲಿದೆ.

ಕಾವೇರಿ.., ಕನ್ನಡ ನಾಡಿನ ಜೀವನದಿ. ತುಲಾ ಸಂಕ್ರಮಣ ಅಥವಾ ಕಾವೇರಿ ಸಂಕ್ರಮಣ ದಿನ ತಲಕಾವೇರಿಯಲ್ಲಿ ಕಾವೇರಿ ಉದ್ಭವಿಸುತ್ತಾಳೆ. ಸಾವಿರಾರು ಜನ ತರ‍್ಥೊದ್ಭವದ ದಿನ ಸ್ಥಳದಲ್ಲಿದ್ದು ಪವಿತ್ರ ತರ‍್ಥ ಸ್ನಾನ ಮಾಡುತ್ತಾರೆ. ಇದೇ ದಿನ ಉಡುಪಿಯ ಇಂದ್ರಾಣಿಯಲ್ಲೂ ಕಾವೇರಿ ಉದ್ಭವಿಸುತ್ತಾಳೆ ಎಂಬ ನಂಬಿಕೆ ಇದೆ. ಮುಖ್ಯಪ್ರಾಣ- ನಾಗ- ಪಂಚ ದರ‍್ಗಾಪರಮೇಶ್ವರಿ ಕ್ಷೇತ್ರದ ಸಮೀಪ ಜಲ ಉದ್ಭವ ಕುಂಡ ಇದೆ. ಇದು ಇಂದ್ರಾಣಿ ನದಿಯ ಉಗಮ ಸ್ಥಳ. ನೂರಾರು ಭಕ್ತರು ದಿನಪರ‍್ತಿ ಇಲ್ಲಿ ಪವಿತ್ರ ಸ್ನಾನ ಮಾಡಿ ಪುನೀತರಾಗುತ್ತಾರೆ.

ಇಂದ್ರಾಣಿ ಕ್ಷೇತ್ರದ ಬಗ್ಗೆ ಪುರಾಣದಲ್ಲೂ ಉಲ್ಲೇಖವಿದೆ. ಚವನ ಮರ‍್ಷಿಗಳು ತಪಸ್ಸು ಮಾಡಿದ್ದ ಈ ಸ್ಥಳದಲ್ಲಿ ದೇವೇಂದ್ರನ ಪತ್ನಿ ಸಚಿ ದೇವಿ ತಪಸ್ಸು ಮಾಡಲು ಕುಳಿತಿರುತ್ತಾಳೆ. ಆ ಸಂರ‍್ಭದಲ್ಲಿ ದೇವೇಂದ್ರ ಭೂಲೋಕಕ್ಕೆ ಬಂದು ಸಚಿ ದೇವಿಯನ್ನು ದೇವಲೋಕಕ್ಕೆ ಕರೆದುಕೊಂಡು ಹೋಗುತ್ತಾರೆ. ತಪಸ್ಸು ಮಾಡಿದ ಫಲವಾಗಿ ಎರಡು ರೂಪದಲ್ಲಿ ಆಕೆ ಇಲ್ಲೇ ಇದ್ದಾಳೆ ಎಂಬ ನಂಬಿಕೆಯಿದೆ. ಸಚಿದೇವಿಯ ರೂಪವೇ ಇಂದ್ರಾಣಿ, ಪಂಚ ದರ‍್ಗಿಯಾಗಿ ಬೆಟ್ಟದ ಮೇಲೆ ಸಚಿದೇವಿಯೇ ನೆಲೆ ನಿಲ್ಲುತ್ತಾಳೆ ಎಂಬ ನಂಬಿಕೆಯಿದೆ.

ಮೂರು ದಶಕಗಳ ಹಿಂದೆ ಇಂದ್ರಾಣಿ ಕ್ಷೇತ್ರದಲ್ಲಿ ಸಾವಿರಾರು ಜನ ಭಕ್ತರು ಪವಿತ್ರ ಸ್ನಾನ ಮಾಡುತ್ತಿದ್ದರು. ಇತ್ತೀಚಿನ ಕೆಲ ರ‍್ಷಗಳಿಂದ ಜನರ ಸಂಖ್ಯೆ ಕಡಿಮೆಯಾಗಿದೆ. ಇಂದ್ರಾಣಿಯ ಉಗಮಸ್ಥಾನವೇನೋ ಸ್ವಚ್ಛವಾಗಿದೆ. ಮುಂದೆ ನದಿ ಹರಿಯುತ್ತಿದ್ದಂತೆ ಸಂಪರ‍್ಣ ಮಲಿನವಾಗಿದೆ. ಸ್ಥಳೀಯರು ನಗರಸಭೆ, ಜಿಲ್ಲಾಡಳಿತ ಈ ಬಗ್ಗೆ ಇಂದ್ರಾಣಿ ನದಿಯನ್ನು ಉಳಿಸಬೇಕು.

Leave a Reply