29 ನೇ ವರ್ಷದ ಕೋಟಿ ಚೆನ್ನಯ ಜೋಡುಕೆರೆ ಕಂಬಳ

ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಮಾರುಗದ್ದೆಯಲ್ಲಿ  29 ನೇ ವರ್ಷದ ಕೋಟಿ ಚೆನ್ನಯ ಜೋಡುಕೆರೆ ಕಂಬಳವನ್ನು ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮುಳಿಯ ಕೇಶವ ಪ್ರಸಾದ್ ಕಾಯೀ ಒಡೆಯುವ ಮೂಲಕ ಉದ್ಘಾಟಿಸಿದ್ರು. ತುಳು ನಾಡಿನ ಸಾಂಸ್ಕ್ರತಿಕ ಕ್ರೀಡೆ ಗಂಡು ಕಲೆ ಎನ್ನಲಾದ ಕಂಬಳದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಸವಣೂರು ಸೀತಾರಾಮ ರೈ ವಹಿಸಿದ್ದರು . ಕಂಬಳ ಕ್ರೀಡೆಯು ಮನೋಬಲ ಮತ್ತು ಬಾಹುಬಲವನ್ನು ಹೆಚ್ಚಿಸುದರ ಜತೆಗೆ ಮಿತ್ರತ್ವವನ್ನು ವ್ರದ್ದಿಸುತದೆ ಎಂದು ಉದ್ಘಾಟಕ ಮುಳಿಯ ಕೇಶವ ಪ್ರಸಾದ್ ತಿಳಿಸಿದರು .ಇದೆ ವೇಳೆ ಸಹಕಾರಿ ರತ್ನ ಪ್ರಶಸ್ತಿಗೆ ಬಾಜನರಾದ ಸೀತಾರಾಮ ರೈ ಯವರನ್ನು ಕಂಬಳದ ವೇದಿಕೆಯಲ್ಲಿ ಸನ್ಮಾನಿಸಲಾಯಿತು .ಸನ್ಮಾನ ಸ್ವೀಕರಿಸಿ ಮಾತನಾಡಿದ ರೈ ಯವರು ಕಂಬಳದ ಯಶಸ್ವಿಗೆ ಶುಭ ಕೋರಿದರು .ಸಮಾರಂಭದಲ್ಲಿ ಮಾಜಿ ಶಾಶಕಿ ಶಕುಂತಳಾ ಶೆಟ್ಟಿ ರೇ ಫಾ ವಿಜಯ ಹಾರ್ವಿನ್ , ಸುಧಾಕರ್ ಶೆಟ್ಟಿ , ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಿದ್ದರು ನೂರಾರು ಕಂಬಳ ಕಾಯಕರ್ತರು ಸೇರಿದಂತೆ ಸಾವಿರಾರು ಕಂಬಳಾಭಿಮಾನಿಗಳು ಭಾಗವಹಿಸಿದ್ದರು 29 ನೇ ವರ್ಷದ ಕಂಬಳದಲ್ಲಿ ಸುಮಾರು 200 ಕ್ಕು ಹೆಚ್ಚು ಕೋಣಗಳು ಭಾಗವಹಿಸಲಿದೆ ಎಂದು ಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ತಿಳಿಸಿದರು.

Leave a Reply