ನವೀನ್ ಅಂತಿಮ ವಿಧಿ-ವಿಧಾನ ವೇಳೆ ವಿವಾಹಶಾಸ್ತ್ರ?

ಉಕ್ರೇನಿನಲ್ಲಿ ಮೃತಪಟ್ಟ ನವೀನ್ ಅವರ ಅಂತಿಮ ವಿಧಿ-ವಿಧಾನ ವೇಳೆ ತಂದೆ ಶೇಖರಪ್ಪ, ತಾಯಿ ವಿಜಯಲಕ್ಷ್ಮಿ, ಸಹೋದರ ಹರ್ಷನ ಕೈಗೆ ಕಂಕಣ ಕಟ್ಟಲಾಗಿತ್ತು. ನಂತರ ನವೀನ್ ತಂದೆ ತೆಂಗಿನಕಾಯಿ ಮೇಲೆ ಕರ್ಪೂರವಿರಿಸಿ ದೇದ ಸುತ್ತ ಪ್ರದಕ್ಷಿಣೆ ಹಾಕಿದರು. ತಾಯಿ ವಿಜಯಲಕ್ಷ್ಮಿ ಆರತಿ ಬೆಳಗಿದರು. ನವೀನ್ ಅವಿವಾಹಿತರಾಗಿದ್ದರಿಂದ ಅವರ ದೇಹದ ಮೇಲೆ ಎಕ್ಕೆ ಗಿಡ ಇರಿಸಿ ವಿವಾಹಶಾಸ್ತ್ರ ಮಾಡಲಾಯಿತು. ಇದಾದ ಮೇಲೆ ದೇಹವನ್ನು ಸಾರ್ವಜನಿಕರ ದರ್ಶನಕ್ಕೆ ಇರಿಸಲಾಯಿತು.

Leave a Reply