ಕತಾರ್ ನಲ್ಲಿ ಕನ್ನಡ ತರಗತಿ!

ಕತಾರ್ ರಾಜಧಾನಿ ದೋಹಾದಲ್ಲಿ ಕರ್ನಾಟಕ ಸಂಘ ಕತಾರ್ ವತಿಯಿಂದ ಅಲ್ಲಿನ ಭಾರತೀಯರ ಮಕ್ಕಳಿಗೆ ಕನ್ನಡ ಕಲಿ ವಾರಾಂತ್ಯ ಶಾಲೆ ಮೇ 22 ರಂದು ಪುನರಾರಂಗೊಂಡಿದೆ. ಕಳೆದೆರಡು ವರ್ಷಗಳಿಂದ ಕೋವಿಡ್ ಕಾರಣಕ್ಕೆ ತರಗತಿಗಳನ್ನು ಆನ್ ಲೈನ್ ಮೂಲಕ ನಡೆಸಲಾಗಿತ್ತು. ಈಗ ಆಫ್ ಲೈನ್ ತರಗತಿಗಳನ್ನು ಆರಂಭಿಸಲಾಗಿದ್ದು, ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಹೆಸರು ನೋಂದಾಯಿಸಿಕೊಂಡಿರುವುದು ವಿಶೇಷ.

Leave a Reply