ವಿಶಿಷ್ಟ ರೀತಿಯ ಯಕ್ಷನೃತ್ಯ ಭಾರೀ ವೈರಲ್

ಕುಂದಾಪುರ,ಅ.19: ಯಕ್ಷಗಾನ ಶೈಲಿಯ ವಂದೇ ಮಾತರಂ ಹಾಡಿನ ಯಕ್ಷ ನೃತ್ಯ ಸದ್ಯ ಕರಾವಳಿಯಾದ್ಯಂತ ವೈರಲ್ ಆಗುತ್ತಿದ್ದು, ಕುಂದಾಪುರ ಮೂಲದ ಭಾವನ ದೇವಾಡಿಗ ಹಾಗೂ ಅವರ ಪುತ್ರ ಆಶೀಷ್ ದೇವಾಡಿಗ ಈ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ. ಬಡಗುತಿಟ್ಟಿನ ಹೆಸರಾಂತ ಭಾಗವತರಾದ ಕೊಳಗಿ ಕೇಶವ ಹೆಗ್ಡೆ ಅವರ ಕಂಠ ಮಾಧುರ್ಯದಲ್ಲಿ ಮೂಡಿ ಬಂದ ಈ ಯಕ್ಷಗಾನದ ಪದ ಸದ್ಯ ತಾಯಿ ಮಗನ ನೃತ್ಯದ ಮೂಲಕ ಮತ್ತೆ ಸುದ್ದಿಯಲ್ಲಿದೆ. ವಿಶೇಷವಾಗಿ ಕುಂದಾಪುರ ಸಮೀಪದ ತ್ರಾಸಿ ಮರವಂತೆ ಕಡಲ ಕಿನಾರೆಯಲ್ಲಿ ಈ ವಿಡಿಯೋ ಸೆರೆ ಹಿಡಿಯಲಾಗಿದೆ.

Leave a Reply