2022 ರ ಮ್ಯಾನ್ ಆಫ್ ದಿ ಇಯರ್ ಪದ್ಮಶ್ರೀ ಟಿ ವಿ ಮೋಹನದಾಸ್ ಪೈ

ಕೊಡಿಯಾಲ್ ಸ್ಫೋರ್ಟ್ ಅಸೋಸಿಯೇಶನ್ ಆಯೋಜಿಸುವ ಫುಜ್ಲಾನಾ ಜಿಪಿಎಲ್ ಉತ್ಸವ 2022 ರಲ್ಲಿ ಪ್ರಪ್ರಥಮ ಬಾರಿ ಈ ವರ್ಷದಿಂದ ವರ್ಷದ ವ್ಯಕ್ತಿ ಪ್ರಶಸ್ತಿ ಪ್ರದಾನ ಮಾಡುವ ಮೂಲಕ ಹೊಸ ಪರಂಪರೆಗೆ ನಾಂದಿ ಹಾಡಲಾಗಿದೆ. ಇತ್ತೀಚೆಗೆ ಮುಕ್ತಾಯಗೊಂಡ ಜಿಪಿಎಲ್ ಉತ್ಸವದಲ್ಲಿ 2022 ರ ಮ್ಯಾನ್ ಆಫ್ ದಿ ಇಯರ್ ಪ್ರಶಸ್ತಿಯನ್ನು ಪದ್ಮಶ್ರೀ ಟಿ ವಿ ಮೋಹನದಾಸ್ ಪೈ ಅವರಿಗೆ ನೀಡಿ ಗೌರವಿಸಲಾಯಿತು. ಮಣಿಪಾಲ್ ಗ್ಲೋಬಲ್ ಎಜುಕೇಶನ್ ಇದರ ಅಧ್ಯಕ್ಷರಾಗಿರುವ ಮೋಹನದಾಸ್ ಪೈ ಅವರು ಇನ್ಫೋಸಿಸ್ ಇದರ ಮಾಜಿ ನಿರ್ದೇಶಕರಾಗಿದ್ದಾರೆ. ಇವರಿಗೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ 2015 ರಲ್ಲಿ ಅರ್ಹವಾಗಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಮೋಹನದಾಸ್ ಪೈ ಅವರು ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯವು ಪ್ರಗತಿಶೀಲ ಮತ್ತು ಅಭಿವೃದ್ಧಿ ಚಿಂತನೆಗಳಿಂದ ಕೂಡಿದ ಸಮಾಜವಾಗಿದೆ. ಸಮಾಜದಲ್ಲಿ ಒಗ್ಗಟ್ಟಿನಿಂದ ಕೆಲಸ ಮಾಡಿ ಮುಂದಿನ ಹತ್ತು ವರುಷಗಳಲ್ಲಿ ಈ ಸಮುದಾಯವನ್ನು ಮತ್ತಷ್ಟು ಏಳಿಗೆ ಕಾಣುವಂತೆ ಮಾಡೋಣ ಎಂದು ಹೇಳಿದರು. ಪ್ರಶಸ್ತಿ ವಿತರಣಾ ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ಫುಜ್ಲಾನಾ ಗ್ರೂಪಿನ ಸತೀಶ್ ಪೈ, ಅರುಣಾ ಮಸಾಲದ ಅನಂತೇಶ್ ಪ್ರಭು, ಹ್ಯಾಂಗ್ಯೋ ಐಸ್ ಕ್ರೀಂನ ಪ್ರದೀಪ್ ಪೈ, ಯಜಮಾನ ಇಂಡಸ್ಟ್ರೀಸ್ ನ ವರದರಾಜ ಪೈ, ಸಿಎ ನಂದಗೋಪಾಲ ಶೆಣೈ, ಉದ್ಯಮಿ ಮುಂಡ್ಕೂರು ರಾಮದಾಸ ಕಾಮತ್, ಸಿಎ ಜಗನ್ನಾಥ ಕಾಮತ್, ಭಾರ್ಗವಿ ಬಿಲ್ಡರ್ಸ್ ನ ಭಾಸ್ಕರ್ ಗಡಿಯಾರ್, ಸೇವಾಂಜಲಿ ಚಾರಿಟೇಬಲ್ ಟ್ರಸ್ಟಿನ ಹನುಮಂತ ಕಾಮತ್, ಆಯೋಜಕರಾದ ಮಂಗಲ್ಪಾಡಿ ನರೇಶ್ ಶೆಣೈ, ನರೇಶ್ ಪ್ರಭು, ಚೇತನ್ ಕಾಮತ್ ಉಪಸ್ಥಿತರಿದ್ದರು. ಆರ್ ಜೆ ಕಿರಣ್ ಶೆಣೈ ನಿರೂಪಿಸಿದರು.

ಈ ಕುರಿತು ಮಾತನಾಡಿದ ನರೇಶ್ ಶೆಣೈಯವರು ಶಾಸಕ ವೇದವ್ಯಾಸ ಕಾಮತ್ ಅಧ್ಯಕ್ಷರಾಗಿರುವ ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ ಕಳೆದ ಎರಡು ದಶಕಗಳಿಂದ ಸಮಾಜದಲ್ಲಿ ವಿಶೇಷ ಸಾಧನೆಗೈದ ಸಾಧಕರನ್ನು ಗುರುತಿಸಿ ವರ್ಷದ ವ್ಯಕ್ತಿ ಪ್ರಶಸ್ತಿ ನೀಡಿ ಗೌರವಿಸುತ್ತಾ ಬಂದಿದೆ. ಈ ವರ್ಷದಿಂದ ಕೊಡಿಯಾಲ್ ಸ್ಫೋಟ್ಸ್ ಅಸೋಸಿಯೇಶನ್ ಹಾಗೂ ಯೂತ್ ಆಫ್ ಜಿಎಸ್ ಬಿ ಜಂಟಿಯಾಗಿ ಜಿಪಿಎಲ್ ಉತ್ಸವದ ಸಂದರ್ಭದಲ್ಲಿ ವರ್ಷದ ವ್ಯಕ್ತಿ ಪ್ರಶಸ್ತಿ ನೀಡುವ ಸಂಕಲ್ಪ ಮಾಡಿದ್ದೇವೆ. ಸಮಾಜವನ್ನು ಒಗ್ಗೂಡಿಸುವ ಈ ಕಾರ್ಯಕ್ರಮದಲ್ಲಿ ಜಿಎಸ್ ಬಿ ಸಮಾಜದ ಕೀರ್ತಿಯನ್ನು ರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿಸಿದ ಅರ್ಹ ವ್ಯಕ್ತಿಗಳಿಗೆ ಈ ಪ್ರಶಸ್ತಿ ನೀಡುವುದು ನಮ್ಮ ಸೌಭಾಗ್ಯ ಎಂದು ಹೇಳಿದರು.

Leave a Reply