ಹೆಡ್‌ಸ್ಕಾರ್ಫ್ ವಿಚಾರ-ಹೈಕೋರ್ಟ್ನಿಂದ ಬೇಗ ತೀರ್ಪು ಬರಲಿ:ಹಿಜಾಬ್ ಹೋರಾಟಗಾರ್ತಿ ವಿದ್ಯಾರ್ಥಿನಿ

ಉಡುಪಿ.ಫೆ.09: ಹೈಕೋರ್ಟ್ನಿಂದ ಬೇಗ ತೀರ್ಪು ಬರಲಿ. ನಮ್ಮ ಶಿಕ್ಷಣದ ಮೇಲೆ ಈ ವಿಚಾರ ದೊಡ್ಡ ಪರಿಣಾಮ ಬೀರುತ್ತಿದೆ ಎಂದು ಹಿಜಾಬ್ ಹೋರಾಟಗಾರ್ತಿ ವಿದ್ಯಾರ್ಥಿನಿಯರು ಹೇಳಿದ್ದಾರೆ.

ಉಡುಪಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ರಿಟ್ ಪಿಟಿಷನ್ ಅರ್ಜಿಗೆ ಸಹಿ ಹಾಕಿರುವ ವಿದ್ಯಾರ್ಥಿನಿಯರಾದ ಸಫಾ ಹಾಗೂ ಆಲಿಯಾ, ಕಾಲೇಜು ಈಗಾಗಲೇ ಪರೀಕ್ಷೆಗಳನ್ನು ಘೋಷಣೆ ಮಾಡಿದೆ. ಹೆಡ್ ಸ್ಕಾರ್ಫ್ ವಿಚಾರದಲ್ಲಿ ಬೇಗ ತೀರ್ಪು ಬರಲಿ. ಇದೊಂದು ದೊಡ್ಡ ವಿಷಯವೇ ಅಲ್ಲ.  ಈ ಪ್ರಕರಣ ಇಷ್ಟು ದೊಡ್ಡದಾಗಿ ಯಾಕೆ ಆಯಿತು ಎಂದು ಗೊತ್ತಾಗುತ್ತಿಲ್ಲ. ನಮಗೆ ಇದೇ ತಿಂಗಳಲ್ಲಿ ಪ್ರ‍್ಯಾಕ್ಟಿಕಲ್ ಲ್ಯಾಬ್ ಪರೀಕ್ಷೆ ಇದೆ. ಮನೆಯಲ್ಲಿ ನಮಗೆ ಓದಲು ಸಾಧ್ಯವಿಲ್ಲ. ಓದಿನಲ್ಲಿ ಏಕಾಗ್ರತೆ ವಹಿಸಲು ಸಾಧ್ಯವಾಗುತ್ತಿಲ್ಲ ಎಂದರು.

ಇಷ್ಟು ದೊಡ್ಡ ಕಮ್ಯುನಲ್ ಗಲಾಟೆ ಆಗುತ್ತದೆ ಅಂದುಕೊ0ಡಿರಲಿಲ್ಲ. ನಾವು ಒಂದೇ ಬಟ್ಟಲಿನಲ್ಲಿ ಊಟ ಮಾಡುತ್ತಿದ್ದವರು. ನಾವು ಕಾಲೇಜಿನಲ್ಲಿ ಜೊತೆಗಿದ್ದವರು. ಈ ಎಲ್ಲ ಬೆಳವಣಿಗೆಗಳನ್ನು ನೋಡಿ ನಮಗೆ ಬಹಳ ನೋವಾಗಿದೆ. ನಮ್ಮವರೇ ನಮಗೆ ವಿರುದ್ಧ ಇದ್ದಾರೆ ಎಂದು ಅಂದುಕೊ0ಡಿರಲಿಲ್ಲ. ಶಾಸಕರು ಹೇಳಿಕೆಗಳನ್ನು ಕೊಡದಿದ್ದರೆ ಕೇಸರಿ ಶಾಲುಗಳು ಹೊರಗೆ ಬರುತ್ತಿರಲಿಲ್ಲ ಎಂದು ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ.

Leave a Reply