ಹುಬ್ಬಳ್ಳಿ-ಮಂಗಳೂರು ವಿಮಾನ ಆರಂಭ

ಹುಬ್ಬಳ್ಳಿ-ಮಂಗಳೂರು ನಗರಗಳ ಮಧ್ಯೆ ವಿಮಾನಯಾನ ಆರಂಭವಾಗಿದೆ. 48 ಪ್ರಯಾಣಿಕರೊಂದಿಗೆ ಹುಬ್ಬಳ್ಳಿಯಿಂದ ಪ್ರಯಾಣ ಆರಂಭಿಸಿದ್ದ ಇಂಡಿಗೋ ವಿಮಾನ ಭಾನುವಾರ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದೆ. ಇಲ್ಲಿಂದ 36 ಮಂದಿ ಹುಬ್ಬಳ್ಳಿಯತ್ತ ಪ್ರಯಾಣ ನಡೆಸಿದರು.
ಸಂಜೆ 6.05 ಕ್ಕೆ ಹುಬ್ಬಳ್ಳಿಯಿಂದ ವಿಮಾನ ತಲುಪಿದ್ದು, 6.35 ಕ್ಕೆ ಹುಬ್ಬಳ್ಳಿಯತ್ತ ಮತ್ತೆ ಹೊರಟಿತು. ಪ್ರತಿ ಭಾನುವಾರ, ಸೋಮವಾರ, ಬುಧವಾರ, ಶುಕ್ರವಾರ ಹುಬ್ಬಳ್ಳಿ-ಮಂಗಳೂರು ನಡುವೆ ವಿಮಾನ ಇರುತ್ತದೆ. ವಿಮಾನವು ಸಂಜೆ 5.15ಕ್ಕೆ ಹುಬ್ಬಳ್ಳಿಯಿಂದ ಹೊರಟು 6.05ಕ್ಕೆ ಮಂಗಳೂರು ತಲುಪಲಿದೆ. ಸಂಜೆ 6.35 ಕ್ಕೆ ಮಂಗಳೂರಿನಿಂದ ಹೊರಟು 7.20ಕ್ಕೆ ಹುಬ್ಬಳ್ಳಿ ತಲುಪಲಿದೆ.

Leave a Reply