ಹಿಜಾಬ್ ವಿವಾದ:ಎಸ್‌ಡಿಪಿಐನಿಂದ ಗುಪ್ತ ಸ್ಥಳದಲ್ಲಿ ತರಬೇತಿ: ಶಾಸಕ ರಘುಪತಿ ಭಟ್ ಆರೋಪ

ಉಡುಪಿ. ಫೆ.೧೦:ಎಸ್‌ಡಿಪಿಐ ಸದಸ್ಯರು ವಿದ್ಯಾರ್ಥಿಗಳಿಗೆ ಗುಪ್ತ ಸ್ಥಳದಲ್ಲಿ ತರಬೇತಿ ನೀಡಿ ವಿವಾದ ಹುಟ್ಟು ಹಾಕಿದ್ದಾರೆ ಎಂದು ಶಾಸಕ ರಘುಪತಿ ಭಟ್ ಆರೋಪಿಸಿದ್ದಾರೆ.

ಹಿಜಾಬ್ ವಿವಾದ ರಾಷ್ಟ್ರ – ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿ ಹೈಕೋರ್ಟ್, ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ. ಉಡುಪಿ ಜಿಲ್ಲೆ ವಿವಾದ ಕೇಂದ್ರಬಿ0ದುವಾಗಿರುವ ಹಿನ್ನಲೆಯಲ್ಲಿ ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಶಾಸಕ ರಘುಪತಿ ಭಟ್ , ” ಉಡುಪಿ ಶಾಲೆಯ ಸುದ್ದಿ ಅಂತರಾಷ್ಟ್ರೀಯ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತದೆ. ಇದರ ಹಿಂದಿನ ಷಡ್ಯಂತ್ರವನ್ನು ನಾವು ಅರ್ಥಮಾಡಿಕೊಳ್ಳಬೇಕಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಘನತೆಯನ್ನು ಕುಂದಿಸುವ ಕೆಲಸ ಇದಾಗಿದೆ. ಮತೀಯವಾದಿ ಸಂಘಟನೆಗಳು ವಿದ್ಯಾರ್ಥಿಯನಿಯರಿಗೆ ತರಬೇತಿ ನೀಡಿ ವಿವಾದವನ್ನು ಮುನ್ನೆಲೆಗೆ ತಂದಿವೆ” ಎಂದು ಆರೋಪಿಸಿದ್ದಾರೆ.

ಎಸ್‌ಡಿಪಿಐನಂತಹ ಮತೀಯವಾದಿ ಸಂಘಟನೆಗಳು ರಾಜಕೀಯ ಲಾಭಕ್ಕಾಗಿ ಕಾಂಗ್ರೆಸ್ ಪಕ್ಷದ ಸಾಂಪ್ರದಾಯಿಕ ಮುಸ್ಲಿಂ ಮತಗಳನ್ನು ಬಾಚಿಕೊಳ್ಳಲು ಹಿಜಾಬ್ ವಿವಾದದ ಷಡ್ಯಂತ್ರ ಹೂಡಿದವು. ಇದಕ್ಕಾಗಿ ಎಸ್‌ಡಿಪಿಐ ಸದಸ್ಯರು ಒಂದಷ್ಟು ವಿದ್ಯಾರ್ಥಿಗಳಿಗೆ ಗುಪ್ತ ಸ್ಥಳದಲ್ಲಿ ತರಬೇತಿ ನೀಡಿ ವಿವಾದ ಹುಟ್ಟು ಹಾಕಿದ್ದಾರೆ ಎಂದು ಹೇಳಿದ್ದಾರೆ.

ಮತೀಯವಾದಿ ಸಂಘಟನೆಗಳು ಹಿಜಾಬ್ ವಿವಾದವನ್ನು ಮುನ್ನೆಲೆಗೆ ತರುತ್ತಲೇ ಕಾಂಗ್ರೆಸ್ ತನ್ನ ಸಾಂಪ್ರದಾಯಿಕ ಮತಗಳು ಕೈಜಾರುವ ಭಯದಿಂದ ಮೌನವೃತಕ್ಕೆ ಜಾರಿತು. ಮತೀಯ ಸಂಘಟನೆಗಳ ಕೈ ಮೇಲಾಗುತ್ತಲೇ ಎಚ್ಚೆತ್ತ ಕಾಂಗ್ರೆಸ್ ನಾಯಕರು ತನ್ನ ಮತಬ್ಯಾಂಕ್ ಉಳಿಸಿಕೊಳ್ಳಲು ಸ್ಪರ್ಧೆಗೆ ಬಿದ್ದವರಂತೆ ಹೇಳಿಕೆ ನೀಡುತ್ತಾ, ವಿವಾದಕ್ಕೆ ತುಪ್ಪ ಸುರಿದರು ಎಂದು ವಾಗ್ದಾಳಿ ನಡೆಸಿದ್ದಾರೆ.

Leave a Reply