ಸಿಎಫ್‌ಐಯವರು ಮೊದಲು ತಮ್ಮ ಹೆಣ್ಣುಮಕ್ಕಳಿಗೆ ಹಕ್ಕು ನೀಡಲಿ:ಯಶ್‌ಪಾಲ್ ಸುವರ್ಣ

ಉಡುಪಿ. ಫೆ.೧೦:ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ದೇಶದ್ರೋಹಿ ಸಂಘಟನೆ. ನನ್ನನ್ನು ಗೂಂಡಾ ಎಂದು ಕರೆದದ್ದಕ್ಕೆ ನನಗೆ ಬೇಸರ ಇಲ್ಲ.ಅವರು ಮೊದಲು ತಮ್ಮ ಮನೆಯಲ್ಲಿ ಹೆಣ್ಣುಮಕ್ಕಳಿಗೆ ಹಕ್ಕು ನೀಡಲಿ. ಅದು ಬಿಟ್ಟು ಶಿಕ್ಷಣ ಸಂಸ್ಥೆಗಳಲ್ಲಿ ಹಕ್ಕು ಕೊಡಿ ಎಂದು ಕೇಳುವ ಹಕ್ಕು ಅವರಿಗಿಲ್ಲ ಎಂದು ಸರಕಾರಿ ಪದವಿಪೂರ್ವ ಕಾಲೇಜಿನ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಯಶ್ಪಾಲ್ ಸುವರ್ಣ ಹೇಳಿದ್ದಾರೆ.

ಈ ಕುರಿತು ಮಾತನಾಡಿದ ಅವರು, ಹಿಜಾಬ್ ಗೆ ಸಂಬ0ಧಿಸಿ ಉಡುಪಿಯ ನಾಯಕರು ಹೇಳಿಕೆ ನೀಡಿಲ್ಲ. ಯಾರೋ ಪೇಯ್ಡ್ ನಾಯಕರು ಹೇಳಿಕೆ ನೀಡಿದ್ದಾರೆ. ಸಿಎಫ್‌ಐ ಒಂದು ದೇಶದ್ರೋಹಿ ಸಂಘಟನೆ. ಅವರು ಭಾರತದ ಹಿತಾಸಕ್ತಿಗೆ ವಿರುದ್ಧವಾಗಿ ಕೆಲಸ ಮಾಡುತ್ತಾರೆ. ಗಲಭೆ ಮಾಡಿ ಭಾರತದ ಆರ್ಥಿಕ ವ್ಯವಸ್ಥೆಗೆ ಹೊಡೆತ ಕೊಡುವುದು ಅವರ ಉದ್ದೇಶ ಎಂದು ವಾಗ್ದಾಳಿ ನಡೆಸಿದ್ದಾರೆ.

ಇನ್ನು ಸಿಎಫ್‌ಐ ಸಂಘಟನೆಯವರು ಮೊದಲು ತಮ್ಮ ಮನೆಯಲ್ಲಿ ಹೆಣ್ಣುಮಕ್ಕಳಿಗೆ ಹಕ್ಕು ನೀಡಲಿ. ಮಸೀದಿಗಳಿಗೆ ಪ್ರವೇಶ ಕುರಿತು ಹೋರಾಟ ಮಾಡಲಿ. ಅದು ಬಿಟ್ಟು ಶಿಕ್ಷಣ ಸಂಸ್ಥೆಗಳಲ್ಲಿ ಹಕ್ಕು ಕೊಡಿ ಎಂದು ಕೇಳುವ ಹಕ್ಕು ಅವರಿಗಿಲ್ಲ. ನಾವು ರಾಷ್ಟ್ರದ ಮೇಲಿನ ಪ್ರೇಮದಿಂದ ಕೆಲಸ ಮಾಡುವವರು ಎಂದಿದ್ದಾರೆ.

ಮುಸ್ಲಿ0 ಮಹಿಳೆಯರು ವಿದ್ಯಾವಂತರಾದಾಗ ಅವರನ್ನು ದಮನಿಸುವ ಯತ್ನಗಳ ಕುರಿತಾಗಿ ಅವರಿಗೆ ತಿಳಿಯುತ್ತದೆ. ಮುಸ್ಲಿಂ ವಿದ್ಯಾರ್ಥಿಗಳು ಶಿಕ್ಷಣ ಪಡೆದು ಮುಖ್ಯ ವಾಹಿನಿಗೆ ಬಂದಾಗ ಅವರನ್ನೇ ಪ್ರಶ್ನೆ ಮಾಡುತ್ತಾರೆ ಆಗ ಸಿಎಫ್ ಐ ಅಟಕ್ಕೆ ಬ್ರೇಕ್ ಬೀಳುತ್ತೆ. ಮುಸ್ಲಿಂ ವಿದ್ಯಾರ್ಥಿಗಳ ಭವಿಷ್ಯಕ್ಕೆ ಅವರೇ ಕೊಳ್ಳಿ ಇಡುತ್ತಿದ್ದಾರೆ. ಶಿಕ್ಷಣ ಪಡೆದ ವಿದ್ಯಾರ್ಥಿ, ಶಿಕ್ಷಕರನ್ನು ಭೇಟಿ ಮಾಡಿ ಕಾಲೇಜಿನಲ್ಲಿ ಆಗಿರುವ ಅಭಿವೃದ್ಧಿ ಕುರಿತು ಅವನು ಪರಿಶೀಲಿಸಬೇಕಿತ್ತು, ಅದುಬಿಟ್ಟು ಯಾರೋ ಬರೆದುಕೊಟ್ಟದ್ದನ್ನು ಓದಿ ಹೇಳುವುದು ಅಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನು ಮುಗ್ದ ಬಾಲಕಿಯರ ಮೂಲಕ ನಾಟಕ ಪ್ರದರ್ಶನ ಮಾಡಿ ಸಂಘಟನೆಯವರು ಮನೆಯಲ್ಲಿ ಟಿವಿಯಲ್ಲಿ ನೋಡಿ ಆನಂದಿಸುತ್ತಿದ್ದಾರೆ. ಸುಳ್ಳು ಆರೋಪ ಗಳನ್ನು ಮುಸ್ಲಿಂ ರಾಷ್ಟ್ರಗಳಲ್ಲಿ ತೋರಿಸಿ ಹಣ ಮಾಡುವ ಸ್ಕೀಮ್ ಇದು. ಮುಸ್ಲಿಂ ಸಮುದಾಯದಲ್ಲಿ ಬಹಳಷ್ಟು ಮಂದಿ ಬಡವರಿದ್ದಾರೆ. ಮಂಡ್ಯದ ಹುಡುಗಿಗೆ ೫ ಲಕ್ಷ ನೀಡುವುದಕ್ಕಿಂತ ಬಡ ಮುಸ್ಲಿಂ ರಿಗೆ ಅದನ್ನು ನೀಡಿ ನಿಜವಾದ ದಾಖಲೆಗಳು ಇದ್ದಲ್ಲಿ ಸಿಎಫ್ ಐ ಮುಖತಃ ಚರ್ಚೆಗೆ ಬರಲಿ ಎಲ್ಲಾ ಮುಸ್ಲಿಂ ಬಡವರುಅಲ್ಲಾಹು ಅಕ್ಬರ್ ಎಂದು ಕೂಗಲಿ, ಎಲ್ಲಾ ಮುಸ್ಲಿಂ ಬಡವರಿಗೆ ಇವರು ೫ ಲಕ್ಷ ರುಪಾಯಿ ನೀಡಲಿ ಎಂದರು.

ಉಡುಪಿಯಲ್ಲಿ ಆದ ಘಟನೆ, ಉಡುಪಿಯ ಮಾದ್ಯಮಗಳಿಗಿಂತ ಮೊದಲು ಅಂತರಾಷ್ಟ್ರೀಯ ಮಟ್ಟದ ಮಾಧ್ಯಮಗಳಲ್ಲಿ ಚರ್ಚೆ ಆಗುವಂತೆ ಮಾಡಿದರು. ಮಣಿಪಾಲದಲ್ಲಿ ಸುಮಾರು ೨೫ ಸಾವಿರ ಎನ್‌ಆರ್‌ಐ ವಿದ್ಯಾರ್ಥಿಗಳು ಇದ್ದಾರೆ. ಆರ್ಥಿಕತೆಗೆ ದಕ್ಕೆ ಉಂಟು ಮಾಡುವ ಸಂಚನ್ನು ಸಿಎಫ್ ಐ, ಪಿಎಫ್ ಐ ಮಾಡಿದೆ ಎಂದು ಕಿಡಿಕಾರಿದ್ದಾರೆ.

Leave a Reply