ಶಾಸಕರ ಹಠಮಾರಿತನದಿಂದ ಹಿಜಾಬ್ ವಿವಾದ ಸೃಷ್ಟಿ-ಕ್ಯಾಂಪಸ್ ಫ್ರಂಟ್ ಆರೋಪ

ಉಡುಪಿ, ಫೆ.09:  ಶಾಸಕ ರಘುಪತಿ ಭಟ್‌ ಅವರ ಹಠಮಾರಿತನದಿಂದ ಹಿಜಾಬ್‌ ವಿವಾದ ಉಂಟಾಗಿದ್ದು ಈ ಮೂಲಕ ಹಿಂದೂ ಮುಸ್ಲಿಂ ಸಂಘರ್ಷ ಆಗಬೇಕೆಂದು ವ್ಯವಸ್ಥಿತ ಷ್ಯಡ್ಯಂತ್ರ ಮಾಡಿದ್ದಾರೆ ಎಂದು ಕ್ಯಾಂಪಸ್‌ ಫ್ರಂಟ್‌ ಆಫ್‌ ಇಂಡಿಯಾದ ರಾಜ್ಯಾಧ್ಯಕ್ಷ ಅಥಾವುಲ್ಲ ಪುಂಜಾಲಕಟ್ಟೆ ಆರೋಪಿಸಿದ್ದಾರೆ.

ಅವರು ಉಡುಪಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಉಡುಪಿಯ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪ್ರಾರಂಭವಾದ ಹಿಜಾಬ್‌ ವಿಚಾರವನ್ನು ಸ್ಥಳೀಯ ಮಟ್ಟದಲ್ಲಿ ಮುಗಿಸದೆ ಅಲ್ಲಿನ ಬಿಜೆಪಿ ಶಾಸಕರಾದ ರಘುಪತಿ ಭಟ್‌ ಅವರ ಕುಮ್ಮಕ್ಕಿನಿಂದ ರಾಜ್ಯದ ವಿವಿಧ ಜಿಲ್ಲೆಗಳಿಗೂ ಹಬ್ಬುವಂತೆ ಮಾಡಿದ ಫೆ. 8 ರಂದು ಹೈಕೋರ್ಟ್‌ ನಲ್ಲಿ ಹಿಜಾಬ್‌ ವಿಚಾರಣೆ ನಡೆಯುವಾಗ ರಾಜ್ಯದಾದ್ಯಂತೆ ಏಕಕಾಲದಲ್ಲಿ ಕೇಸರಿ ಶಾಲು ಪೇಟ ಧರಿಸಿಕೊಂಡು ಜೈ ಶ್ರೀರಾಮ್‌ ಘೋಷಣೆಯೊಂದಿಗೆ ಗಲಭೇ ನಡೆಸಿರುವುದರಿಂದ ಇದರ ಹಿಂದೆ ಎಬಿವಿಪಿ ಮತ್ತು ಸಂಘಪರಿವಾರದ ಮುಖಂಡ ಯಶ್ಪಾಲ್‌ ಸುವರ್ಣ ಕೈವಾಡ ಇದೆ ಎಂದು ಆರೋಪಿಸಿದರು.
ಹಿಜಾಬ್‌ ವಿರೋಧಿಸುವ ನೆಪದಲ್ಲಿ ಶಿವಮೊಗ್ಗ ಕಾಲೇಜಿನಲ್ಲಿ ರಾಷ್ಟ್ರಧ್ವಜ ಹಾರಿಸುವ ಧ್ವಜಸ್ತಂಭದಲ್ಲಿ ಭಗವಾ ಧ್ವಜ ಹಾರಿಸಿ ರಾಜ್ಯದಾದ್ಯಂತೆ ವಿದ್ಯಾರ್ಥಿಗಳನ್ನು ಪ್ರಚೋದಿಸಿ ಜೈ ಶ್ರೀರಾಮ್‌ ಘೋಷಣೆ ಕೂಗುವಂಎ ಕೇಸರಿ ಶಾಲು ಒದಗಿಸಿ ಸಾರ್ವಜನಿಕ ಆಸ್ತಿಗಳನ್ನು ಧ್ವಂಸ ಮಾಡಿಸಿ ಮಂಡ್ಯದಲ್ಲಿ ಕಾಲೇಜಿಗೆ ತೆರಳುತ್ತಿದ್ದ ಒಬ್ಬಂಟಿ ವಿದ್ಯಾರ್ಥಿನಿಯ ಮೇಳೆ ಮುಗಿಬಿದ್ದು ದೌರ್ಜನ್ಯ ಎಸಗಿ, ಮಡಿಕೇರಿಯಲ್ಲಿ ಬಲವಂತವಾಗಿ ಕೇಸರಿ ಶಾಲು ಧರಿಸಲು ಹೇಳಿ ತನ್ನದೇ ಸಹಪಾಠಿಗೆ ಚೂರಿಯಿಂದ ಇರಿದು ರಾಝ್ಯದಾದ್ಯಂತ ಒಂದೇ ಸಮಯದ್ಲಲಿ ಗಲಭೆಗೆ ನೇತೃತ್ವ ನೀಡಿದವರು ಸಂಘಪರಿವಾರದವರೆಂದು ಸ್ಪಷ್ಟವಾಗಿದೆ ಆದರೆ ಇನ್ನೂ ಕೂಡ ಭಗವಾ ಧ್ವಜ ಹಾರಿಸಿದವರ ವಿರುದ್ದ ದೇಶದ್ರೋಹದ ಪ್ರಕರಣ ದಾಖಲಾಗಿಲ್ಲ. ಇಷ್ಟೆಲ್ಲಾ ರಾದ್ದಾಂತ ನಡೆಯುವಾಗ ಮುಖ್ಯಮಂತ್ರಿಯವರ ಮೌನವು ವಿಪರ್ಯಾಸವಾಗಿದೆ ಎಂದರು.
ಎಬಿವಿಪಿ ಮತ್ತು ಸಂಘಪರಿವಾರ ಇಷ್ಟೆಲ್ಲಾ ರಾದ್ಧಾಂತ ರಾಜ್ಯದಾದ್ಯಂತ ನಡೆಸಿದರೂ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣ ಸಚಿವರಾದ ನಾಗೇಶ್‌ರವರು ಕ್ಯಾಂಪಸ್‌ ಫ್ರಂಟ್‌ ಮೇಲೆ ನಿರಾಧಾರ ಆರೋಪ ಮಾಡಿರುವುದು ಖಂಡನೀಯ. ಹಿಜಾಬ್‌ ವಿಚಾರದಲ್ಲಿ ಕ್ಯಾಂಪಸ್‌ ಫ್ರಂಟ್‌ ಯಾವತ್ತಿಗೂ ಮಂಚೂಣಿಯಲ್ಲಿ ನಿಂತು ಸಂವಿಧಾನಕ್ಕೆ ಬದ್ಧವಾಗಿ ವಿದ್ಯಾರ್ಥಿನಿಯರ ಸಾಂವಿಧಾನಿಕ ಹಕ್ಕುಗಳ ಪರವಾಗಿ ಕಾನೂನಾತ್ಮಕವಾಗಿ ಹೋರಾಟ ಮಾಡುತ್ತದೆ ಎಂದು ಅವರು ಹೇಳೀದರು.
ಸುದ್ದಿಗೋಷ್ಠಿಯಲ್ಲಿ ಕ್ಯಾಂಪಸ್‌ ಫ್ರಂಟ್‌ ಕರ್ನಾಟಕ ರಾಜ್ಯ ಸಮಿತಿ ಸದಸ್ಯ ಮಸೂದ್‌ ಮನ್ನಾ, ಜಿಲಾಧ್ಯಕ್ಷ ಅಸೀಲ್‌ ಅಕ್ರಂ ಉಪಸ್ಥಿ

Leave a Reply