ವಿಟ್ಲ ಕನ್ಯಾನದ ಅಪ್ರಾಪ್ತ ಹುಡುಗಿ ಲವ್ ಜಿಹಾದಿಗೆ ಬಲಿ

ವಿಟ್ಲ ಕನ್ಯಾನದ ಅಪ್ರಾಪ್ತ ಹುಡುಗಿ ಲವ್ ಜಿಹಾದಿಗೆ ಬಲಿ -ಇದೊಂದು ವ್ಯವಸ್ಥಿತ ಕೊಲೆ – ಉನ್ನತ ಮಟ್ಟದ ತನಿಖೆಗೆ ವಿಶ್ವ ಹಿಂದೂ ಪರಿಷತ್ ಆಗ್ರಹ
ವಿಟ್ಲ ಕನ್ಯಾನ ಗ್ರಾಮದ ಕಾಣಿಯೂರಿನಲ್ಲಿ 14 ವರ್ಷದ ಅಪ್ರಾಪ್ತ ಬಾಲಕಿ ಆತ್ಮಿಕ ಸಾವನ್ನಪ್ಪಿದ್ದಾಳೆ. ಸಾಹುಲ್ ಹಮೀದ್ ಎಂಬ ಮುಸ್ಲಿಂ ಯುವಕ ಪ್ರೀತಿಸುವಂತೆ ಪೀಡಿಸಿ, ಅವನ ಕಾಟ ತಡೆಯಲಾರದೆ ಹುಡುಗಿ ಸಾವನ್ನಪ್ಪಿದ್ದಾಳೆ, ಮೇಲ್ನೋಟಕ್ಕೆ ಆತ್ಮಹತ್ಯೆ ದಾಖಲಾಗಿದ್ದು ಇದು ಆತ್ಮಹತ್ಯೆಯಲ್ಲ ಕೊಲೆ. ಸಾಹುಲ್ ಹಮೀದ್ ವಾಮಾಚಾರವನ್ನು ಪ್ರಯೋಗಿಸಿ, ಬೆದರಿಸಿ, ಅವಳಿಗೆ ಬುರ್ಖಾ ಹಾಕಿಸಿ ಅವಳನ್ನು ಅವನ ಕುಟುಂಬದವರ ಸಹಕಾರದಿಂದ ಮನೆಗೆ ಕರೆದುಕೊಂಡು ಹೋಗುತ್ತಿದ್ದ ಎಂದು ಆ ಹುಡುಗಿಯ ಮನೆಯವರು ಆರೋಪಿಸಿದ್ದಾರೆ. ಇದೊಂದು ವ್ಯವಸ್ಥಿತ ಲವ್ ಜಿಹಾದ್ ಕೃತ್ಯವಾಗಿದೆ. ವಿಶ್ವ ಹಿಂದೂ ಪರಿಷತ್ತಿನ ಪ್ರಮುಖರ ಜೊತೆ ಹುಡುಗಿಯ ಮನೆಗೆ ಹೋಗಿ ಮನೆಯವರಿಗೆ ಸಾಂತ್ವನ ಹೇಳಲಾಯಿತು. ಅಲ್ಲದೆ ಈ ಸಾವಿಗೆ ಕಾರಣವಾದ ಸಾಹುಲ್ ಹಮೀದ್ ಮತ್ತು ಅವನ ಮನೆಯವರನ್ನು ಕೂಡಲೇ ಬಂಧಿಸಿ ಅವರಮೇಲೆ ಕೊಲೆ ಮೊಕ್ಕದ್ದಮೆ ದಾಖಲಿಸಿ ಉನ್ನತ ಮಟ್ಟದ ತನಿಖೆ ನಡೆಸಬೇಕೆಂದು ಆಗ್ರಹಿಸುತ್ತೇನೆ  ಎಂದು ವಿಶ್ವ ಹಿಂದೂ ಪರಿಷತ್ ಮುಖಂಡರಾದ ಶರಣ್ ಪಂಪ್ವೆಲ್ ಹೇಳಿದ್ದಾರೆ.

Leave a Reply