ವಾಸಿಯಾಗದ ಕಾಯಿಲೆ ಇದೆ: ಮಿಸ್ ಯೂನಿವರ್ಸ್

ಗುಣಪಡಿಸಲಾಗದ ಸೆಲಿಯಾಕ್ ಎಂಬ ಕಾಯಿಲೆಯಿಂದ ಬಳಲುತ್ತಿರುವುದಾಗಿ ಮಿಸ್ ಯೂನಿವರ್ಸ್ ಹರ್ನಾಜ್ ಕೌರ್ ಸಂಧು ಬಹಿರಂಗಪಡಿಸಿದ್ದಾರೆ. ಇತ್ತೀಚೆಗೆ ಲಾಕ್ಮೆ ಫ್ಯಾಶನ್ ವೀಕ್ ನಲ್ಲಿ ಭಾಗವಹಿಸಿದ ಸಂಧು ದಪ್ಪಗಾಗಿದ್ದಾರೆ ಎಂದು ಜನರು ಟ್ರೋಲ್ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಸಂಧು ತಮಗಿರುವ ಸೆಲಿಯಾಕ್ ಕಾಯಿಲೆ ದಪ್ಪಗಾಗಲು ಕಾರಣ ಎಂದಿದ್ದಾರೆ. ಇದರಲ್ಲಿ ರೋಗಿಯ ಸಣ್ಣ ಕರುಳು ಘಾಸಿಯಾಗುತ್ತದೆ. ಹೀಗಾಗಿ ಗ್ಲುಟೆನ್ ಪ್ರೋಟಿನ್ ಇರುವ ಪದಾರ್ಥಗಳನ್ನು ತಿಂದರೆ ಕಾಯಿಲೆ ಉಲ್ಬಣವಾಗುತ್ತದೆ. ದಪ್ಪಗಿದ್ದರೂ, ತೆಳ್ಳಗಿದ್ದರೂ ನನ್ನ ದೇಹವನ್ನು ನಾನು ಪ್ರೀತಿಸುತ್ತೇನೆ

Leave a Reply