ಮೂರನೇ ದಿನವೂ ಮುಂದುವರಿದ ಹಿಜಾಬ್-ಕೇಸರಿ ಶಾಲು ವಿವಾದ

ಕುಂದಾಪುರ, ಫೆ.4: ಹಿಜಾಬ್ ಧರಿಸಿ ಬಂದ ಹಿನ್ನೆಲೆಯಲ್ಲಿ ಸತತ ಎರಡನೇ ದಿನವೂ ಕುಂದಾಪುರ ಸರ್ಕಾರಿ ಜೂನಿಯರ್ ಕಾಲೇಜಿನ ವಿದ್ಯಾರ್ಥಿನಿಯರು ಕಾಲೇಜು ಆವರಣದ ಹೊರಗೆ ರಸ್ತೆ ಬದಿಯಲ್ಲಿ ಕುಳಿತುಕೊಳ್ಳುವಂತಾಗಿದೆ.

ಕಾಲೇಜು ಆವರಣ ಪ್ರವೇಶಿಸುವಂತಿಲ್ಲ ಎಂದು ಪ್ರಾಂಶುಪಾಲರು ಸೂಚಿಸಿದ ಹೊರತಾಗಿಯೂ ವಿದ್ಯಾರ್ಥಿನಿಯರು ಗೇಟ್ ತಳ್ಳಿ ಒಳಕ್ಕೆ ಪ್ರವೇಶಿಸಿದಿ ಕಾಲೇಜು ಆವರಣದಲ್ಲಿ ಇರಲು ಅವಕಾಶ ನೀಡುವಂತೆ ಆಗ್ರಹಿಸಿದರು.
ಕಾಲೇಜು ಉಪನ್ಯಾಸಕರು ವಿದ್ಯಾರ್ಥಿನಿಯರ ಮನ ಒಲಿಸಲು ಯತ್ನಿಸಿದರೂ ಪ್ರಯೋಜನವಾಗಿಲ್ಲ. ಇನ್ನು ಸ್ಕಾರ್ಫ್ ಧರಿಸಿ ವಿದ್ಯಾರ್ಥಿನಿಯರನ್ನು ತರಗತಿಗೆ ತೆರಳಲು ಅನುಮತಿ ನೀಡದ ಕಾಲೇಜು ಆಡಳಿತ ಮಂಡಳಿ ನಿರ್ಧಾರವನ್ನು ಆಕ್ಷೇಪಿಸಿ ಪೋಷಕರು ಗೇಟ್ ಹೊರಭಾಗದಲ್ಲಿ ನಿಂತು ಪ್ರತಿಭಟಿಸಿದರು.
ಬೆಳಗ್ಗೆಯಿಂದ ವಿದ್ಯಾರ್ಥಿನಿಯರು ಗೇಟ್ ಹೊರಭಾಗದಲ್ಲೇ ಕುಳಿತು ನಿರಂತರವಾಗಿ ಓದಿನಲ್ಲಿ ಮಗ್ನರಾಗಿದ್ದರು. ಮಧ್ಯಾಹ್ನ ಮುಸ್ಲಿಂ ಸಂಘಟನೆಯ ಯುವಕರು ಇವರಿಗೆ ಅನ್ನಾಹಾರ ಒದಗಿಸಿದರು.
ನಮ್ಮ ಹಿರಿಯರೂ ಹಿಜಾಬ್ ಧರಿಸುತ್ತಿದ್ದರು. ಹಿಜಾಬ್ ನಮ್ಮ ಜೀವನದ ಭಾಗ. ಅಚಾನಕ್ಕಾಗಿ ಈಗೇಕೆ ಈ ನಿಯಮ ಬಂತೋ ತಿಳಿಯದು. ನಾವು ಹಿಜಾಬ್ ಧರಿಸಿದ್ರೆ ಯಾರಿಗೆ ಏನು ತೊಂದರೆ ಇದೆ. ನಮಗೆ ಯಾರೂ ಸಪೋರ್ಟ್ ಮಾಡುತ್ತಿಲ್ಲ. ಹಿಜಾಬ್ ಧರಿಸಲು ಅವಕಾಶ ಬೇಕು. ಜತೆಗೆ ಶಿಕ್ಷಣವೂ ನಮಗೆ ಇಂಪಾರ್ಟೆAಟ್ ಎಂದು ವಿದ್ಯಾರ್ಥಿನಿಯೋರ್ವರು ಹೇಳುತ್ತಾರೆ.

ಇನ್ನು ಉಡುಪಿ ಕುಂದಾಪುರ ಕಾಲೇಜಿನಲ್ಲಿ ಹಿಜಾಬ್-ಕೇಸರಿ ಶಾಲು ವಿವಾದ ಪ್ರಕರಣದ ಬೆನ್ನಲ್ಲೇ ಇದೀಗ ಬೈಂದೂರು ಕಾಲೇಜಿನಲ್ಲಿ ಇಂತಹದ್ದೇ ವಿವಾದ ಹುಟ್ಟಿಕೊಂಡಿದೆ. ಬೈಂದೂರಿನ ಸರಕಾರಿ ಪದವು ಪೂರ್ವ ಕಾಲೇಜಿನಲ್ಲಿ ೩೦೦ಕ್ಕೂ ಅಧಿಕ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಹಾಜರಾಗಿದದಾರೆ. ಈ ವೇಳೆ ಉಪನ್ಯಾಸಕರು ಸಮವಸ್ತç ಧರಿಸಿದರೆ ಮಾತ್ರವೇ ತರಗತಿಗಳಿಗೆ ಪ್ರವೇಶ ಎಂದು ತಿಳಿಸಿದ್ದು ವಾಗ್ವಾದಕ್ಕೂ ಕಾರಣವಾಯಿತು. ಅಂತಿಮವಾಗಿ ಹಿಜಾಬ್ ಹಾಗೂ ಕೇಸರಿ ಶಾಲು ಧರಿಸಿದ ವಿದ್ಯಾರ್ಥಿಗಳಿಗೆ ತರಗತಿಗಳಿಗೆ ಪ್ರವೇಶ ನೀಡಲಾಗಿದೆ.

Leave a Reply