ಮರವಂತೆ ಯ ಕಡಲ ಕಿನಾರೆಯಲ್ಲಿ ರಾಜ್ಯಮಟ್ಟದ ಜಲಜಾನಪದೋತ್ಸವ-ಡಾ. ಭಾರತಿ ಮರವಂತೆ

ಕುಂದಾಪುರ : ಪುರಾತನ ಕಾಲದ ಜಾನಪದ ಶೈಲಿಯನ್ನು ಈಗಿನ ಕಾಲದ ಸಮಾಜಕ್ಕೆ ತಿಳಿಸುವ ಉದ್ದೇಶದಿಂದ ಇದೆ ಬರುವ ಬರುವ ದಿನಾಂಕ ಮಾರ್ಚ್ 20 ರಂದು ಮರವಂತೆ ಯ ಕಡಲ ಕಿನಾರೆಯಲ್ಲಿ ರಾಜ್ಯಮಟ್ಟದ ಜಲಜಾನಪದೋತ್ಸವ ನಡೆಯಲಿದೆ ಎಂದು ಕನ್ನಡ ಜಾನಪದ ಪರಿಷತ್ ಕರಾವಳಿ ವಿಭಾಗದ ಸಂಚಾಲಕರಾದ ಡಾ. ಭಾರತಿ ಮರವಂತೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಈ ಕಾರ್ಯಕ್ರಮದಲ್ಲಿ ವೇದಿಕೆಯ ಮೇಲೆ ಜಾನಪದ ಶೈಲಿಯ ಕಂಗಿಲು ಕುಣಿತ, ಸೋಮನ ಕುಣಿತ, ಚಂಡೆ ವಾದನ,ಕೋಲಾಟ, ಗಮಟೆ ನ್ರತ್ಯ, ನಡೆಯಲಿದೆ. ಹಾಗೂ ಸ್ತಬ್ದ ಚಿತ್ರ, ಕಂಬಳ, ಕೋಳಿ ಅಂಕ ಪ್ರದರ್ಶನವಿದೆ.
ಈ ಕಾರ್ಯಕ್ರಮದ ಉದ್ಘಾಟನೆಯನ್ನು ಉಸ್ತುವಾರಿ ಮಂತ್ರಿಗಳಾದ ಎಸ್ ಅಂಗಾರ ಅವರು ಮಾಡಲಿದ್ದಾರೆ. ಪ್ರಕೃತಿ ರಮಣೀಯವಾದ ಈ ಮರವಂತೆಯಲ್ಲಿ ಒಂದೆಡೆ ಭೋರ್ಗರೆಯುವ ಸಮುದ್ರ, ಇನ್ನೊಂದೆಡೆ ಶಾಂತವಾಗಿ ಹರಿಯುವ ಸೌಪರ್ಣಿಕ ನದಿ ನಡುವೆ ಹಾದುಹೋಗುವ ಹೆದ್ದಾರಿಯ ಸಮೀಪದಲ್ಲಿರುವ ಬಯಲು ಪ್ರದೇಶದಲ್ಲಿ ಜಲ ಜಾನಪದೋತ್ಸವವು ನಡೆಯಲಿದೆ ಎಂದರು.
ಈ ಸುದ್ದಿಗೋಷ್ಠಿಯಲ್ಲಿ ಜಾನಪದೋತ್ಸವ ಸಮಿತಿಯ ಗೌರವ ಸಲಹೆಗಾರರಾದ ಕನರಾಡಿ ವಾದಿರಾಜ್ ಭಟ್, ಸಮಿತಿಯ ಸಂಚಾಲಕರಾದ ದಯಾನಂದ್ ಬಳೆಗಾರ್, ಜಯಶೀಲ ಶೆಟ್ಟಿ ಉಪಸ್ಥಿತರಿದ್ದರು.

Leave a Reply