ಮದುವೆಯಿಂದ ಪತಿಯ ಜಾತಿ ಪತ್ನಿಗೆ ಬರೋದಿಲ್ಲ: ಹೈಕೋರ್ಟ್

ತಂದೆಯ ಜಾತಿಯ ಆಧಾರದ ಮೇಲೆ ಮಕ್ಕಳ ಜಾತಿ ನಿರ್ಧಾರವಾಗುತ್ತದೆ ವಿನ: ಪತಿಯ ಜಾತಿ ಮೇಲೆ ಎಲೆಕ್ಷನ್ ನಲ್ಲಿ ಗೆದ್ದ ವ್ಯಕ್ತಿಯ ಆಯ್ಕೆ ಊರ್ಜಿತವಾಗುವುದಿಲ್ಲ ಎಂದು ಮಾನ್ಯ ಉಚ್ಚ ನ್ಯಾಯಾಲಯ ಆದೇಶ ನೀಡಿದೆ. ವಿವಾಹದ ನಂತರ ಪತಿಯ ಜಾತಿ ಪತ್ನಿಗೆ ವರ್ಗಾವಣೆಯಾಗುವುದಿಲ್ಲ. ಇನ್ನು ತಂದೆಯ ಜಾತಿಯನ್ನು ಜನ್ಮದ ಆಧಾರದ ಮೇಲೆ ಮಕ್ಕಳು ಪಡೆಯುತ್ತಾರೆ ಎಂದು ಹೈಕೋರ್ಟ್ ಸ್ಪಷ್ಟವಾಗಿ ತಿಳಿಸಿದೆ. ಪರಿಶಿಷ್ಟ ಜಾತಿ ಅಥವಾ ಪಂಗಡದಲ್ಲಿ ಹುಟ್ಟಿದವರು ಮಾತ್ರ ಆ ಜಾತಿಗೆ ಮೀಸಲು ಆಗಿರುವ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಬಹುದಾಗಿದೆ. ಮದುವೆಯಾದ ನಂತರ ಗಂಡನ ಜಾತಿಯ ಆಧಾರದ ಮೇಲೆ ಮೀಸಲು ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದ ಶಿವಮೊಗ್ಗದ ಬಾಳೆಕೊಪ್ಪ ನಿವಾಸಿ ಎಂ ಜಿ ಅರ್ಚನಾ ಎಂಬುವರ ಆಯ್ಕೆಯನ್ನು ಅಸಿಂಧುಗೊಳಿಸಿದ್ದ ಅಧೀನ ನ್ಯಾಯಾಲಯದ ತೀರ್ಪು ಪುರಸ್ಕರಿಸಿ ಹೈಕೋರ್ಟ್ ಈ ಸ್ಪಷ್ಟನೆ ನೀಡಿದೆ.

Leave a Reply