ಬಪ್ಪಿ ಲಹರಿ ಆಭರಣಗಳು ಮುಂದೇನು?

ಬಾಲಿವುಡ್ ನ ಸಂಗೀತ ನಿರ್ದೇಶಕ ದಿವಂಗತ ಬಪ್ಪಿ ಲಹರಿ ಹೆಚ್ಚೆಚ್ಚು ಚಿನ್ನಾಭರಣಗಳನ್ನು ಧರಿಸುವುದಕ್ಕೂ ಖ್ಯಾತಿ ಪಡೆದಿದ್ದವರು. ಇತ್ತೀಚೆಗೆ ಅವರು ನಿಧನರಾದ ಅನಂತರ ಅವರ ಆಭರಣಗಳನ್ನು ಯಾರು ಧರಿಸುತ್ತಾರೆ ಎಂಬ ಪ್ರಶ್ನೆ ಬಪ್ಪಿಯವರ ಅಭಿಮಾನಿಗಳಲ್ಲಿ ಮೂಡಿತ್ತು. ಅದಕ್ಕೆ ಅವರ ಪುತ್ರ ಸ್ಪಷ್ಟನೆ ನೀಡಿದ್ದಾರೆ. ಬಪ್ಪಿ ಲಹರಿ ಹೆಸರಿನಲ್ಲಿ ಮ್ಯೂಸಿಯಂ ಆರಂಭಿಸಲು ನಿರ್ಧರಿಸಲಾಗಿದ್ದು, ಅಲ್ಲಿ ಅವರ ಸಂಗೀತ ಉಪಕರಣಗಳು, ಹಾಡುಗಳ ಕ್ಯಾಸೆಟ್ ಹಾಗೂ ಡಿಸ್ಕ್ ಗಳ ಜೊತೆಗೆ ಅವರ ಆಭರಣಗಳನ್ನು ಪ್ರದರ್ಶನಕ್ಕಿಡಲಾಗುತ್ತದೆ ಎಂದಿದ್ದಾರೆ.

Leave a Reply