ಬಡ ಹೆಣ್ಣು ಮಕ್ಕಳನ್ನು ಹಿಜಬ್ ಹೆಸರಲ್ಲಿ ಪ್ರಚೋದಿಸಲಾಗುತ್ತಿದೆ-ಶೋಭಾ ಕರಂದ್ಲಾಜೆ ಹೇಳಿಕೆ

ಯುಪಿ ಚುನಾವಣೆ ಗೆಲುವು ವಿಚಾರ

ಅಭಿವೃದ್ಧಿ ಆಧಾರದಲ್ಲಿ ಉತ್ತರಪ್ರದೇಶದಲ್ಲಿ ನಡೆದ ಮೊದಲ ಚುನಾವಣೆ

ಇಷ್ಟು ವರ್ಷಗಳ ಕಾಲ ಜಾತಿ, ಧರ್ಮದ ಆಧಾರದಲ್ಲಿ ಚುನಾವಣೆ ನಡೆಯುತ್ತಿತ್ತು

ಮೊದಲ ಬಾರಿಗೆ ಅಭಿವೃದ್ಧಿ ಮಾಡಿ ಗೆಲ್ಲಬಹುದು ಅನ್ನೋದನ್ನ ಬಿಜೆಪಿ ತೋರಿಸಿದೆ

ಮುಂದಿನ ವಾರದಲ್ಲಿ ಮುಖ್ಯಮಂತ್ರಿ ಹಾಗೂ ಹೊಸ ಮಂತ್ರಿಮಂಡಲ ಉತ್ತರಪ್ರದೇಶದಲ್ಲಿ ರಚನೆಯಾಗಲಿದೆ

———-

ಕೃಷಿ ಕಾಯ್ದೆ ರದ್ದತಿ ಚುನಾವಣೆಯ ಮೇಲೆ ಪರಿಣಾಮ ವಿಚಾರ

ಕೃಷಿ ಕಾಯ್ದೆಯಿಂದ ರೈತರಿಗೆ ಲಾಭವಾಗುತ್ತಿತ್ತು

ಕೃಷಿ ಕಾಯ್ದೆಯನ್ನು ವಾಪಸು ಪಡೆದ ನಂತರ ರೈತರ ಬೆಳೆಗೆ ಕ್ವಿಂಟಾಲಿಗೆ 100 -150 ರೂಪಾಯಿ ಕಡಿಮೆ ಆಗಿದೆ

ಅಂತರಾಷ್ಟ್ರೀಯ ಮತ್ತು ದೇಶಿಯ ಅಪಪ್ರಚಾರದಿಂದ ಹೋರಾಟ ನಡೆಯಿತು

ಜನರ ಭಾವನೆಗೆ ಗೌರವ ಕೊಟ್ಟು ಕೇಂದ್ರ ಕಾಯ್ದೆವಾಪಸ್ಸು ಪಡೆಯಿತು

ಕಾಯ್ದೆ ವಾಪಸ್ಸು ಪಡೆದಿದ್ದರಿಂದ ರೈತರಿಗೆ ನಷ್ಟವಾಗಿದೆ ಅನ್ನುವುದು ಸತ್ಯ

ರೈತರ ಹೋರಾಟಕ್ಕೆ ಉತ್ತರಪ್ರದೇಶದ ಚುನಾವಣೆಗೂ ಯಾವುದೇ ಸಂಬಂಧವಿಲ್ಲ

ಹಾಗಂತ ಉತ್ತರ ಪ್ರದೇಶದ ರೈತರು ತೋರಿಸಿಕೊಟ್ಟಿದ್ದಾರೆ

ಕಾಯ್ದೆ ಮತ್ತೆ ಜಾರಿಗೆ ತರುವ ವಿಚಾರ ಯಾವುದೇ ಚರ್ಚೆ ನಡೆಯುತ್ತಿಲ್ಲ

—————

ನವೀನ್ ಮೃತ ದೇಹ ತವರಿಗೆ ವಾಪಸು ತರುವ ವಿಚಾರ

ಯುದ್ಧದ ಕಾರಣಕ್ಕೆ ಸತ್ತಂತಹ ಏಕೈಕ ಭಾರತೀಯ ನವೀನ್

ಇನ್ನೋರ್ವ ವಿದ್ಯಾರ್ಥಿ ಅನಾರೋಗ್ಯದಿಂದ ತೀರಿಕೊಂಡಿದ್ದಾರೆ

ನವೀನ್ ಮೃತದೇಹವನ್ನು ಕಾಯ್ದಿರಿಸಲಾಗಿದೆ

ಅನಾರೋಗ್ಯದಿಂದ ಮೃತನಾದ ವ್ಯಕ್ತಿಯ ಮೃತದೇಹ ಭಾರತಕ್ಕೆ ಬಂದಿದೆ

ಹತ್ತು ದಿನಗಳ ಹಿಂದೆಯೇ ಒಂದು ಮೃತದೇಹ ಬಂದಿದೆ

ಯುದ್ಧದ ವಾತಾವರಣ ಇನ್ನೂ ಜೀವಂತ ಇರುವುದಿಂದ ನವೀನ ಮೃತದೇಹ ಬರಲಿಲ್ಲ

ಉಕ್ರೇನ್ ಒಳಗೆ ಹೋಗಿ ಮೃತದೇಹ ತರುವುದು ಕಷ್ಟಕರವಾಗುತ್ತಿದೆ

ಆಯಾ ದೇಶಗಳ ಜೊತೆ ಸಂಬಂಧ ಉತ್ತಮ ಇದ್ದ ಕಾರಣ ಭಾರತೀಯ ವಿದ್ಯಾರ್ಥಿಗಳನ್ನು ಕರೆತರಲು ಸಾಧ್ಯವಾಯಿತು

ಸುಮಾರು 20 ಸಾವಿರ ವಿದ್ಯಾರ್ಥಿಗಳನ್ನು ಕರೆತಂದಿದ್ದೇವೆ

ಸುಮಾರು 90 ವಿಮಾನಗಳ ಮೂಲಕ ವಿದ್ಯಾರ್ಥಿಗಳನ್ನು ಕರೆತಂದಿದ್ದೇವೆ

ನವೀನ ಅವರ ಮೃತದೇಹ ತರುವುದಕ್ಕೂ ಭಾರತ ಸರ್ಕಾರ ಪ್ರಯತ್ನ ಮಾಡುತ್ತಿದೆ

ಸಂಸತ್ತಿನಲ್ಲೂ ಕೂಡ ಈ ಬಗ್ಗೆ ಹೇಳಿಕೆ ನೀಡಲಾಗಿದೆ

ಸ್ವತಹ ಪ್ರಧಾನಿಯವರು ಮತ್ತು ವಿದೇಶಾಂಗ ಸಚಿವರು ಇದರ ಬಗ್ಗೆ ಕಾಳಜಿ ವಹಿಸಿದ್ದಾರೆ

ಖಂಡಿತವಾಗಿಯೂ ಮೃತದೇಹ ತರಿಸುವ ಬಗ್ಗೆ ಭರವಸೆ ವ್ಯಕ್ತಪಡಿಸಿದ್ದಾರೆ

ಉಕ್ರೇನ್ ರಾಷ್ಟ್ರ ಜೊತೆ ಈ ದೃಷ್ಟಿಯಿಂದ ಭಾರತ ಸರ್ಕಾರ ಸಂಪರ್ಕದಲ್ಲಿದೆ

——–

ಹಿಜಬ್ ವಿವಾದ ವಿಚಾರ

ದೇಶದ ಸಂವಿಧಾನವನ್ನು ಪ್ರತಿಯೊಬ್ಬ ನಾಗರಿಕ ಗೌರವಿಸಬೇಕು

ನೆಲದ ಕಾನೂನನ್ನು- ಪ್ರತಿಯೊಬ್ಬ ನಾಗರಿಕ ಗೌರವಿಸಬೇಕು

ಆದರೆ ಸಂವಿಧಾನಕ್ಕಿಂತ ನಾವು ಮೇಲು ಎಂದು ಕೆಲವರಿಗೆ ಅನಿಸಿದೆ

ಹೈಕೋರ್ಟ್ ತೀರ್ಪಿಗಿಂತಲೂ ನಾವು ಮೇಲು ಎಂಬ ದಾರ್ಷ್ಟ್ಯ ತೋರಿಸುತ್ತಿದ್ದಾರೆ

ಕಾನೂನಿನಂತೆ ಈ ವರ್ತನೆಗೆ ಶಿಕ್ಷೆ ಆಗುವ ಅನಿವಾರ್ಯತೆ ಇದೆ

ನಮ್ಮ ಮಕ್ಕಳಿಗೆ ಬೇಕಾಗಿರುವುದು ಉತ್ತಮ ಶಿಕ್ಷಣ

ಶಿಕ್ಷಣ ಮತ್ತು ಉದ್ಯೋಗಕ್ಕೆ ಧರ್ಮ ಇಲ್ಲ

ಮಕ್ಕಳು ಓದಬೇಕು ಉದ್ಯೋಗ ಪಡೆಯಬೇಕು ಸ್ವಂತ ಕಾಲ ಮೇಲೆ ನಿಲ್ಲಬೇಕು

ಮುಸಲ್ಮಾನ ಹೆಣ್ಣು ಮಕ್ಕಳು ಕೂಡ ಒಳ್ಳೆಯ ಶಿಕ್ಷಣ ಪಡೆಯಬೇಕು

ಆದರೆ ಬಡ ಹೆಣ್ಣು ಮಕ್ಕಳನ್ನು ಹಿಜಬ್ ಹೆಸರಲ್ಲಿ ಪ್ರಚೋದಿಸಲಾಗುತ್ತಿದೆ

ಶ್ರೀಮಂತರಿಗೆ ಹಿಜಬ್ ಜೊತೆ ಯಾವುದೇ ಸಂಬಂಧವಿಲ್ಲ

ಬಡ ಹೆಣ್ಣು ಮಕ್ಕಳನ್ನು ಪ್ರಚೋದನೆ ಮಾಡಿ ಈ ಕೃತ್ಯ ಮಾಡಿಸಲಾಗುತ್ತಿದೆ

ಶಾಲೆಗೆ ಬೇಕಾದರೂ ಹೋಗಲ್ಲ ಆದರೆ ಹಿಜಾಬ್ ಅಗತ್ಯ ಎನ್ನುತ್ತಿದ್ದಾರೆ

ಇದೊಂದು ವ್ಯವಸ್ಥಿತ ಷಡ್ಯಂತ್ರ

ಯಾವುದೋ ಸಂಘಟನೆ ಈ ಕೆಲಸ ಮಾಡುತ್ತಿದೆ ಎಂದು ಹೈಕೋರ್ಟ್ ಕೂಡ ಹೇಳಿದೆ

ಇದರ ಹಿಂದಿರುವ ಕಾರಣಗಳನ್ನು ಪತ್ತೆ ಹಚ್ಚಬೇಕಾಗಿದೆ

ಎಲ್ಲಾ ಮಕ್ಕಳು ದಯಮಾಡಿ ಶಾಲೆಗೆ ಬನ್ನಿ

ಶಾಲೆಯ ಪ್ರಾಂಶುಪಾಲರು ಶಿಕ್ಷಕರು ನಿಮ್ಮ ರಕ್ಷಣೆ ಮಾಡುತ್ತಾರೆ

ಯಾರು ಕೂಡ ಆತಂಕಪಡುವ ಅಗತ್ಯವಿಲ್ಲ

ಪರೀಕ್ಷೆ ಬರೆಯಿರಿ ಚೆನ್ನಾಗಿ ಓದಿ ಉದ್ಯೋಗ ಪಡೆಯಿರಿ

ಹಿಂದೂಮುಸಲ್ಮಾನ ಹೆಣ್ಣು ಮಕ್ಕಳು ಸ್ವಂತ ಕಾಲ ಮೇಲೆ ನಿಲ್ಲಬೇಕು

ಕೈಗೆ ದುಡ್ಡು ಬಂದರೆ ಆಗ ಮಹಿಳೆಯರಿಗೆ ಧ್ವನಿ ಬರುತ್ತೆ

ಎಲ್ಲ ಧರ್ಮದವರಿಗೂ ಇದು ಅನ್ವಯವಾಗುತ್ತದೆ

ನಿಮ್ಮ ಜೀವನದಲ್ಲಿ ಕಷ್ಟ ಬಂದಾಗ ಯಾವುದೇ ಸಂಘಟನೆಗಳು ಬರುವುದಿಲ್ಲ

ಯಾರದೋ ಪಿತೂರಿಗೆ ಬಲಿಯಾಗಬೇಡಿ

——–

ಕಾಂಗ್ರೆಸ್ ವೋಟ್ ಬ್ಯಾಂಕ್ ರಾಜಕೀಯ ಮಾಡಿದ ಪರಿಣಾಮ ಈಗ ನಾಪತ್ತೆಯಾಗಿದೆ

ಐದು ದಶಕಗಳಕಾಲ ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ರಾಜ್ಯಬಾರ ಮಾಡಿತ್ತು

ಉತ್ತರಪ್ರದೇಶ ಗೆದ್ದರೆ ದೇಶ ಗೆದ್ದಂತೆ ಎಂಬ ಭಾವನೆಯಿತ್ತು

ಈಗ ಕಾಂಗ್ರೆಸ್ ನ ಪರಿಸ್ಥಿತಿ ಏನಾಗಿದೆ ನೋಡಿ

ಓಲೈಕೆ ರಾಜಕಾರಣದಿಂದ ಕೆಳಹಂತಕ್ಕೆ ಬಿದ್ದಿದ್ದಾರೆ

ಇಷ್ಟಾದರೂ ಅವರಿಗೆ ಬುದ್ಧಿ ಬಂದಿಲ್ಲ

ಕರ್ನಾಟಕದಲ್ಲಿ ಸ್ವಲ್ಪ ಕಾಂಗ್ರೆಸ್ ಉಸಿರಾಡುತ್ತಿದೆ

ಆದರೆ ಸಿದ್ದರಾಮಯ್ಯ ಮತ್ತು ಡಿಕೆಶಿ ಸೇರಿ ಕಾಂಗ್ರೆಸ್ನ ಉಸಿರುಗಟ್ಟಿ ಸುತ್ತಾರೆ

ಸಿದ್ದರಾಮಯ್ಯ ಸ್ವತಹ ವಕೀಲರು

ಹೈಕೋರ್ಟ್ ತೀರ್ಪನ್ನು ವಿಧಾನಸಭೆಯಲ್ಲಿ ಅವರು ವಿರೋಧಿಸುತ್ತಾರೆ ಅಂದರೆ ಏನು ಅರ್ಥ

ಸಿದ್ದರಾಮಯ್ಯನವರ ಮಾನಸಿಕತೆ ಏನು ಅನ್ನೋದು ಜನರಿಗೆ ಅರ್ಥವಾಗುತ್ತಿದೆ

ಕಾಂಗ್ರೆಸ್ ನಾಯಕರೇ ಕಾಂಗ್ರೆಸನ್ನು ಮುಳುಗಿಸುತ್ತಾರೆ

ಕರ್ನಾಟಕವನ್ನು ಮತ್ತೊಂದು ಕಾಶ್ಮೀರ ಮಾಡಲು ಬಿಡುವುದಿಲ್ಲ

Leave a Reply