ನೀರೆ ಗ್ರಾಮದಲ್ಲಿ ಕಾಡುಕೋಣ

ಜನವಸತಿ ಪ್ರದೇಶಕ್ಕೆ ಕಾಡುಕೋಣ ನುಗ್ಗಿ ಕೆಲಕಾಲ ಅತಂಕ ಸೃಷ್ಟಿಸಿದ ಘಟನೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ನೀರೆ ಗ್ರಾಮದಲ್ಲಿ ನಡೆದಿದೆ. ನೀರೆ ಬೈಲೂರಿನ ಮೀಸಲು ಅರಣ್ಯ ಮುಳ್ಯಾಕ್ಕಾರು ನಿವಾಸಿ ಲೀಲಾವತಿ ಪೂಜಾರ್ತಿಯವರ ಮನೆಗೆ ಅಂಗಳಕ್ಕೆ ಬಂದ ಕಾಡು ಕೋಣ, ಮನೆಯ ಕೆಲ ಭಾಗಗಳಿಗೆ ಹಾನಿ ಮಾಡಿ, ಕೃಷಿ ಬೆಳೆಯನ್ನು ಹಾಳು ಮಾಡಿದೆ. ಮನೆಯವರು ಬೊಬ್ಬೆ ಹಾಕಿ ಓಡಿಸುವ ಪ್ರಯತ್ನ ಮಾಡಿದರೂ ಕಾಡು ಕೋಣ ಹೋಗದೇ ಇದ್ದಾಗ, ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಸತತ ಐದು ಗಂಟೆ ಕಾರ್ಯಚರಣೆ ನಡೆಸಿ, ಅರಿವಳಿಕೆ ನೀಡಿ ಕಾಡು ಕೋಣ ಸೆರೆಹಿಡಿದರು. ಎಂಟು ವರ್ಷದ ಕಾಡುಕೋಣ ಎಂದು ಅಂದಾಜಿಸಲಾಗಿದ್ದು, ಸುರಕ್ಷಿತವಾಗಿ ಕುದುರೆಮುಖ ವನ್ಯಜೀವಿದಾಮಕ್ಕೆ ಬಿಡಲಾಯಿತು.

Leave a Reply