ಕಾಪು ಪ್ರಥಮ ದರ್ಜೆ ಕಾಲೇಜಿನಲ್ಲಿ ಹೆಚ್ಚಿನ ಮುಸ್ಲಿಂ ವಿದ್ಯಾರ್ಥಿಗಳು ಪರೀಕ್ಷೆಗೆ ಗೈರು

ಉಚ್ಚ ನ್ಯಾಯಾಲಯದ ಹಿಜಾಬ್ ಕುರಿತ ತೀರ್ಪು ಖಂಡಿಸಿ ಮುಸ್ಲಿಂ ಸಂಘಟನೆಗಳು ಗುರುವಾರ ನೀಡಿದ ಬಂದ್ ಕರೆಗೆ ಕಾಪು ತಾಲೂಕಿನಾದ್ಯಂತ ಎಲ್ಲಾ ಮುಸ್ಲಿಂ ವ್ಯಾಪಾರಸ್ಥರ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಬಂದ್ ಗೆ ಬೆಂಬಲ ಘೋಷಿಸಿದ್ದಾರೆ.
ಮುಸ್ಲಿಂ ಸೆಂಟ್ರಲ್ ಕಮಿಟಿ ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ ಮತ್ತಿತರ ಮುಸ್ಲಿಂ ಸಂಘಟನೆಗಳ ಬೆಂಬಲದಲ್ಲಿ ನಡೆಯುತ್ತಿರುವ ಬಂದ್ ಗೆ ಬೆಂಬಲ ಸೂಚಿಸಿ ಗುರುವಾರ ಕಾಪು ತಾಲೂಕಿನಾದ್ಯಂತ ಎಲ್ಲಾ ಅಂಗಡಿ ಮುಗ್ಗಟ್ಟುಗಳನ್ನು ಮುಚ್ಚಿ ಬೆಂಬಲ ಸೂಚಿಸಿದ್ದರು.
ಉಚ್ಚಿಲ, ಕಾಪು ಪೇಟೆ, ಪಡುಬಿದ್ರಿ, ಮಲ್ಲಾರು, ಪಲಿಮಾರು,ಕಟಪಾಡಿ, ಶಿರ್ವ ಪರಿಸರ ದಲ್ಲಿ ಅಂಗಡಿಗಳನ್ನು ಮುಚ್ಚಿ ಪ್ರತಿಭಟನೆ ವಹಿಸಿದ್ದಾರೆ.
೦೦೦೦೦೦೦೦೦
ಉಚ್ಚಿಲ ಸಮುದ್ರದಲ್ಲಿ ಪಚ್ಚೆಲೆ ಅಜಿರ್ ತೆಗೆಯುತ್ತಿದ್ದ ೭ ಜನ ಪೊಲೀಸರ ವಶಕ್ಕೆ
ಉಚ್ಚಿಲ ಸಮುದ್ರದಲ್ಲಿಯ ಬಂಡೆ ಕಲ್ಲಿನಲ್ಲಿ ಪಚ್ಚೆಲೆ ತೆಗೆಯುತ್ತಿದ್ದ ೭ ಮಂದಿಯನ್ನು ಸ್ಥಳೀಯ ಮೀನುಗಾರರು ಉಚ್ಚಿಲ ಸುಭಾಸ್ ರಸ್ತೆ ಬಳಿಯ ಸಮುದ್ರ ಕಿನಾರೆಗೆ ತಂದು ಅವರನ್ನು ಪಡುಬಿದ್ರಿ ಪೊಲೀಸರಿಗೆ ಒಪ್ಪಿಸಿದ ಘಟನೆ ಗುರುವಾರ ಘಟಿಸಿದೆ.
ಈ ಏಳು ಮಂದಿ ದಕ್ಷಿಣ ಭಾರತದ ಕೂಲಿ ಕೆಲಸಗಾರರಾಗಿದ್ದು, ಮಾಲಕರು ಬೇರೆಯೇ ಆಗಿದ್ದಾರೆ. ಅವರು ಉಪಯೋಗಿಸುತ್ತಿದ್ದ ದೋಣಿಗಳನ್ನು ದಂಡೆಗೆ ತಂದು ನಿಲ್ಲಿಸಲಾಗಿದೆ.
೦೦೦೦೦೦೦೦
ಕಾಪು ಪ್ರಥಮ ದರ್ಜೆ ಕಾಲೇಜಿನಲ್ಲಿ ಹೆಚ್ಚಿನ ಮುಸ್ಲಿಂ ವಿದ್ಯಾರ್ಥಿಗಳು ಪರೀಕ್ಷೆಗೆ ಗೈರು
ಕಾಪುವಿನ ಪ್ರಥಮದರ್ಜೆ ಕಾಲೇಜಿನಲ್ಲಿ ೨೪ ಮಂದಿ ಮುಸ್ಲಿಂ ವಿದ್ಯಾರ್ಥಿಗಳು ಇದ್ದು, ಇದರಲ್ಲಿ ಕೇವಲ ಆರು ವಿದ್ಯಾರ್ಥಿಗಳು ಗುರುವಾರ ಪರೀಕ್ಷೆಗೆ ಹಾಜರಾಗಿದ್ದಾರೆ. ಹದಿನೆಂಟು ಮಂದಿ ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ.
ಒಟ್ಟು ೧೭ ಮುಸ್ಲಿಂ ಹುಡುಗಿಯರಿದ್ದು ಎಲ್ಲರಿಗೂ ಇಂದು ಪರೀಕ್ಷೆ ಇತ್ತು. ಇದರಲ್ಲಿ ಕೇವಲ ಐದು ಮಂದಿ ವಿದ್ಯಾರ್ಥಿನಿಯರು ಪರೀಕ್ಷೆಗೆ ಹಾಜರಾಗಿದ್ದು ಉಳಿದ ಹನ್ನೆರಡು ಮಂದಿ ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ.
ಗುರುವಾರ ಮುಸ್ಲಿಂ ಸಂಘಟನೆಗಳು ಬಂದ್‌ಗೆ ಕರೆ ನೀಡಿದ ಹಿನ್ನಲೆಯಲ್ಲಿ ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ.

Leave a Reply